ರಿಯೇ ನನ್ನ ನೆನಪು. ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ಹಸಿರು, ಕಣ್ತುಂಬಿಕೊಳ್ಳುವಂತಹ ಆಗತಾನೆ ನಾಟಿ ಮಾಡಿದ ಭತ್ತದ ಗದ್ದೆಗಳು ನನಗೂ-ನನ್ನ ಮಿತ್ರರಿಗೂ ಸಂಭಾಷಣೆಯ ವಿಷಯಗಳು. ಅಲ್ಲಿ ತಲುಪಿದ ಕೂಡಲೇ ಉಪಹಾರ ಮುಗಿಸಿದ ನಾವು ಒಂದು ಸುತ್ತು ಮಠ ವೀಕ್ಷಣೆ ನಡೆಸಿದೆವು. ಹಚ್ಚ ಹಸುರಿನ ಮಧ್ಯೆ ಸಲ್ಫೀ ಕ್ಲಿಕ್ಕಿಸುವ ನಮ್ಮ ಹುಡುಗರ ಗೋಜು ಕೇಳಬೇಕೇ?
ಸದ್ಯ ಅವರನ್ನು ತಡೆಯುಯುವವರೂ ಯಾರೂ ಇಲ್ಲವೆಂಬುದು ಮತ್ತಷ್ಟು ಸಂತಸ
.
ಒಂದು ಸುತ್ತು ಎಲ್ಲ ವಿವಿಧ ರಾಜ್ಯಗಳ ರಾಸುಗಳ ತಳಿಗಳನ್ನು ವೀಕ್ಷಿಸಿದ ನಾವು ಅವುಗಳ ಫೋಟೋ ತೆಗೆಯುವ ಅವುಗಳೊಂದಿಗೆ ನಿಂತು ತೆಗೆಯಿಸಿಕೊಳ್ಳುವ ಹುಚ್ಚಲ್ಲೇ ಹೆಚ್ಚು ಕಾಲ ಕಳೆದು ಅಂತೂ ಶೈಕ್ಷಣಿಕ ಪ್ರವಾಸಕ್ಕೆ ಅರ್ಥ ಬರುವಂತೆಯೂ ಮಾಡಿದೆವು.
ನಂತರ ಅಲ್ಲಿನ ಅಷ್ಟೇನೂ ಎತ್ತರವಲ್ಲದ ಗುಡ್ಡದ ಮೇಲಿಂದ ಕೆಳಗಿಳಿದ ನಾವು ತೆರಳಿದ್ದು ಅಲ್ಲೇ ಆ ಮಠದ ಗುಡ್ಡದ ಬುಡದಲ್ಲಿದ್ದ ನದಿಯ(ಹೆಸರು ಗೊತ್ತಿಲ್ಲ) ತೀರದೆಡೆಗೆ. ಸ್ವಚ್ಛಂದವಾಗಿ ಹರಿಯುತ್ತಿದ್ದ ನೀರನ್ನು ಕಂಡು ಹಾರಾಡಿ- ಕೂಗಾಡಿದ ಹುಡುಗಿಯರು ಒಂದೆಡೆಯಾದರೆ, ಇನ್ನೊಂದೆಡೆ, ನಮ್ಮ ಹುಡುಗರ ನೀರಿನೊಂದಿಗಿನ ಮೋಜಿನ ಮಸ್ತಿ. ಅಲ್ಲಿ ಫೋಟೋ ತೆಗೆದುಕೊಂಡು ಮೇಲೆ, ಅವನ್ನು ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಹಾಕಿ ಲೈಕು ಗಿಟ್ಟಿಸಿಕೊಳ್ಳುವ ತವಕ ಹುಚ್ಚೇ ಸರಿ....!
ಅದಿರಲಿ, ನಮ್ಮ ಕುವೆಂಪುರವರ, ದೇವರು ರಜು ಮಾಡಿದನು ಗೀತೆಯ "ಕಿಕ್ಕಿರಿದಡವಿಡಗಳಂಚಿನ ನಡುವೆ ಮೆರೆದಿಹ ಜಲಸುಂದರಿ ತುಂಗೆಯ" ಎಂಬ ಮಾತಿನ ನಿಜವಾದ ಸ್ವರೂಪ ಅರ್ಥವಾಗಿದ್ದೂ ಕೂಡ ಅಲ್ಲೇ....
ಅದಿರಲಿ, ನಮ್ಮ ಕುವೆಂಪುರವರ, ದೇವರು ರಜು ಮಾಡಿದನು ಗೀತೆಯ "ಕಿಕ್ಕಿರಿದಡವಿಡಗಳಂಚಿನ ನಡುವೆ ಮೆರೆದಿಹ ಜಲಸುಂದರಿ ತುಂಗೆಯ" ಎಂಬ ಮಾತಿನ ನಿಜವಾದ ಸ್ವರೂಪ ಅರ್ಥವಾಗಿದ್ದೂ ಕೂಡ ಅಲ್ಲೇ....
ಅಲ್ಲಿಂದ ಮುಂದೆ ಸಾಗಿದ ನಾವು, ಅದೇ ಮಠದ ಬಳಿಯಿರುವ ಗುರುಕುಲಕ್ಕೆ ತೆರಳಿದೆವು.ಅಲ್ಲಿನ ವಾತಾವರಣ, ಶುದ್ಧ ಪರಿಸರ, ಸುತ್ತಲೂ ಹಸಿರಾದ ಪ್ರಕೃತಿ ಸಂಪತ್ತು, ಬಯಲು ಸೀಮೆಯಲ್ಲಿ ಹಸಿರನ್ನೇ ಕಾಣದ ನನಗೆ ಅತೀವ ಸಂತೃಪ್ತಿಯನ್ನುಂಟುಮಾಡಿತ್ತು. ಅಲ್ಲಿ ವೈಚಾರಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಎಲ್ಲಾ ರೀತಿಯಿಂದಲೂ ನೀಡುವ ಶಿಕ್ಷಣದ ಪರಿ ನಿಜಕ್ಕೂ ಸೋಜಿಗ.
ಪ್ರಾಚೀನ ಭಾರತದ ಸಂಸ್ಕೃತಿ ಗಟ್ಟಿಯಾಗಿರುವ ಜಾಗವದು.ಅಲ್ಲಿನ ಮಕ್ಕಳು ನಮ್ಮನ್ನು ನೋಡಿದ ಕೂಡಲೇ "ಹರೇ-ರಾಮ್" ಎಂದು ಹೇಳುತ್ತಿದ್ದ ಮಾತು ನಮ್ಮನ್ನು ಎಲ್ಲಿಗೋ ಕರೆದೊಯ್ಯುತ್ತಿ್ತ್ತು.
ಪ್ರಾಚೀನ ಭಾರತದ ಸಂಸ್ಕೃತಿ ಗಟ್ಟಿಯಾಗಿರುವ ಜಾಗವದು.ಅಲ್ಲಿನ ಮಕ್ಕಳು ನಮ್ಮನ್ನು ನೋಡಿದ ಕೂಡಲೇ "ಹರೇ-ರಾಮ್" ಎಂದು ಹೇಳುತ್ತಿದ್ದ ಮಾತು ನಮ್ಮನ್ನು ಎಲ್ಲಿಗೋ ಕರೆದೊಯ್ಯುತ್ತಿ್ತ್ತು.
ನಂತರ ಮಧ್ಯಾನ್ಹದ ಭೋಜನವನ್ನೂ ಅಲ್ಲಿಯೇ ಮುಗಿಸಿ ಬಸ್ಸು ಹತ್ತಿದ ನಾವು, ಡ್ರೈವರಿನೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ್ದೆವು....! ಮತ್ತು ಅದರೊಂದಿಗೆ ನಮ್ಮ ನೆನಪನ್ನು ಅತೀವಗೊಳಿಸಿದ್ದೆವು. ಅಲ್ಲಿಂದ ಸುಮಾರು ಒಂದೆರಡು ಕಿಲೋ ಮೀಟರ್ ದೂರದಲ್ಲಿರುವ ವಿನಾಯಕ ದೇವಸ್ಥಾನಕ್ಕೆ ತೆರಳಿ ಗಣಪತಿಯ ದರ್ಶನ ಪಡೆದೆವು. ಅದಕ್ಕಿಂತ ಮಖ್ಯವಾಗಿ ದೇವಸ್ಥಾನದ ರಚನೆ ನಮ್ಮನ್ನು ಮೂಕವಿಸ್ಮಯರನ್ನಾಗಿಸಿತು. ಸಂಪೂರ್ಣ ಗರ್ಭಗುಡಿಯೊಂದನ್ನು ಬಿಟ್ಟು ಉಳಿದೆಲ್ಲ ಗೋಡೆ-ಬಾಗಿಲುಗಳು ವಿವಿಧ ಬಣ್ಣದ ಗಾಜಿನ ಚೂರಿನಿಂದ ಮಾಡಿದ್ದು ಅತ್ಯಂತ ಸುಂದರ. ಅಲ್ಲಿಯೂ ಕೂಡ ಫೋಟೋ ಮತ್ತು ಸೆಲ್ಫೀ ಕ್ಲಿಕ್ಕಿಸುವವರೇನು ಕಡಿಮೆಯಿರಲಿಲ್ಲ.
ಅಲ್ಲಿಂದ ಇಪ್ಪತೈದು ಕಿ.ಮೀ.ದೂರದಲ್ಲಿರುವ 'ಹುಂಚ ಜೈನ ಬಸದಿ'ಗೆ ಮಧ್ಯಾನ್ಹ 3:30 ರ ವೇಳೆಗೆ ತಲುಪಿದೆವು. ಬಸದಿ ಆರಂಭವಾಗುವುದು ಸಂಜೆ ನಾಲ್ಕರ ನಂತರ ಎಂದು ತಿಳಿದಾಗ ಅಲ್ಲೇ ಇದ್ದ ಗುಡ್ಡ ಹತ್ತಲು ಹೋದೆವು. ಅಲ್ಲಿನ ಕೊಂಕು ಚೇಷ್ಟೆ, ಆನೆಯ ಮಾವುತನೊಂದಿಗೆ ನಡೆಸಿದ ವಿಷಯಪರಿ, ಅವನ ಬಳಿಯಿದ್ದ ಕುದುರೆಯೆನ್ನೇರಿ ತೆಗಿಸಿಕೊಂಡ ಫೋಟೋ ..! ಅದನ್ನೂ ಮರೆಯುವಂತಿಲ್ಲ. ಗುಡ್ಡದ ಎತ್ತರ ಪ್ರದೇಶ ಏರಿ ನಿಂತರೆ, ಸುತ್ತಲೂ ಹಸಿರು ಆವರಿಸಿತ್ತು. ತಂಪಾದ ಹಿತವಾದ ವಾತಾವರಣ, ನಮ್ಮೆಲ್ಲರ ಮನಸ್ಸನ್ನು ಸೂರೆಗೂಳ್ಳುವಂತೆ ಮಾಡಿತ್ತು. ಸ್ವಲ್ಪ ಹೊತ್ತಿನ ಬಳಿಕ ಕೆಳಗಿಳಿದ ನಾವು ಬರಿಗಾಲಲ್ಲಿ ಇದ್ದುದರಿಂದ ಪೇಚಾಡಬೆಕಾಯಿತು(ಗೆಳೆಯ ಅನಂತನ್ ಎಡವಿದ್ದರಿಂದ ಅವನ ಕಾಲು ಕಿತ್ತುಹೋಗಿ ರಕ್ತ ಬರುತ್ತಿತ್ತು). ಅಲ್ಲಿನ ಜೈನ ಬಸದಿಯಲ್ಲಿ ಮಹಾವೀರ ತೀರ್ಥಂಕರರ ದರ್ಶನದ ನಂತರ ಬಂದ ಬಸ್ಸುನ್ನೇರಿ ವಾಪಸ್ಸು ಕಾಲೇಜಿನೆಡೆಗೆ ಹಿಂದಿರುಗಿದೆವು.